ಇಂದೇಕೆ  ಬರಲಿಲ್ಲ ಗೆಳತಿ......

ಬೇಡವೆಂದರೂ ಬೇಸರಿಕೆ ನನ್ನನ್ನು ಆವರಿಸಿದೆ 
ಏನಾದರೂ ಪಿಸುಗುಡೋಣ ವೆಂದರೆ  ಗೆಳತಿ ಪಕ್ಕದಲ್ಲಿಲ್ಲ 
ಅವಳೇಕೆ ಇಂದು ಗೈರು ಹಾಜರಿಯೋ 
ನನಗು ತಿಳಿದಿಲ್ಲ ....... 
ತರಗತಿಗೆ ಬಂದಾಗಿನಿಂದ ಬಾಗಿಲೆಡೆಗೆ  ನನ್ನ ದೃಷ್ಟಿ 
ಈಗ ಬಂದಾಳು , ಮತ್ತೆ  ಬರುವಳು 
ಎಂಬ ಸಾಂತ್ವನದ ಮಾತು ಮನದಲ್ಲಿ 
ಹರಟಲೆಂದೇ ಹೊತ್ತು ತಂದಿದ್ದೆ ಹೊಸ ವಿಷಯಗಳ ಬುತ್ತಿ
ಇಂದು ಅವಳೆ ಇಲ್ಲ ಏನು ಮಾಡಲಿ?...... 
ಬರುವುದಿಲ್ಲವೆಂದು ಮುಂಚಿತವಾಗಿ ತಿಳಿಸುತಿದ್ದವಳು
ಇಂದೇಕೆ ಹೀಗೆ ಮಾಡಿದಳೊ?
ಆರೋಗ್ಯ ಸರಿ ಇಲ್ಲವೆ ಅಥವಾ ಮನೆಯಲ್ಲಿ ಏನಾದರೂ ಸಮಸ್ಯೆಯೇ ?
ಹೀಗೆ ಹುಚ್ಚುಚ್ಚು ಕಲ್ಪನೆಗಳು....... 
ಅಂತೂ ನಾನಿಂದು ಒಬ್ಬಂಟಿ 
ಎಲ್ಲದರಲ್ಲೂ  ನನಗೆ ನಿರಾಸಕ್ತಿ 
ಹೇಗೋ  ಮನಸನ್ನು ಕೆಂದ್ರೀ ಕರಿಸಿ 
ಕುಳಿತೆ  ಪಾಠದಕಡೆ ಗಮನವಿರಿಸಿ 
ಆದರೂ ಮನದ ಕೂಗು ಕೇಳಿಸುತಿತ್ತು 
ಇಂದೇಕೆ  ಬರಲಿಲ್ಲ ಗೆಳತಿ...... ?
                                           - ಜಯಶ್ರೀ.  ಜೆ . ಗೌಡ 

Comments

  1. ನೀನು ಬರೆದ ಕವನ
    ಸೆಳೆಯಿತೆನ್ನ ಗಮನ
    ನಿನಗಿದೋ ನನ್ನ ನಮನ
    ಹೀಗೆಯೇ ಬರೆಯುತಿರು ಅನುದಿನ

    ReplyDelete

Post a Comment

Popular posts from this blog

ಅಪ್ಪ

To My Love