ನನ್ನ ಕೈಗೆಟುಕದ ಚಂದಿರ
ಎತ್ತರದ ಬಾನಲ್ಲಿ ಮುದ್ದಾದ ಚಂದಿರ ಹುಣ್ಣಿಮೆಯ ರಾತ್ರಿಯಲ್ಲಿ ಬೆಳದಿಂಗಳ ಚಿತ್ತಾರ ...... ಚೆಲುವೆಯನ್ನು ಮೀರಿಸುವಂತ ಹೊಳಪು ಆ ನನ್ನ ಚಂದಿರನಲ್ಲಿ ತುಂಬಿಕೊಳ್ಳಲಿ ಹೇಗೆ ಆ ಕಂಪು ಈ ನನ್ನ ಕಣ್ಣುಗಳಲ್ಲಿ ತೃಪ್ತಿಯಿಂದ ನಗುತಿರಲು ಅವನು ಬಾನಂಗಳದಲ್ಲಿ ಮನವು ತೇಲುತಿತ್ತು ತಂಗಾಳಿಯಲ್ಲಿ ತಟ್ಟನೆ ನೆನಪಾದೆ ನೀನು ನನ್ನ ಮನದ ಚಂದಿರ ಕಣಂಚಿನ ಧಾರೆಯಲ್ಲಿ ಮೂಡಿತ್ತು ನಿನ್ನ ನೆನಪುಗಳ ಆಧಾರ.... ನಾ ಎಷ್ಟೋ ಹೊತ್ತಿದ್ದೆ ಕನಸುಗಳನ್ನು ನಿನ್ನೊಡಗೂಡಿ ನೋಡಲು ಈ ಚಂದಿರನನ್ನು..... ಮನದ ಮಾತುಗಳನ್ನು ಹಂಚಿಕೊಂಡಿದ್ದೆ ಪ್ರೀತಿಯ ಲೋಕದಲ್ಲಿ ಕಳೆದುಹೋಗಿದ್ದೆ ನನ್ನ ಬದುಕಿಗೆ ನೀ ಬೆಳದಿಂಗಳಾಗಿದ್ದೆ ಕಾರ್ಮೋಡ ಕವಿದಂತೆ ನೀ ಮರೆಯಾಗಿ ಹೋದೆ ನಿನ್ನ ನೆನಪುಗಳಲ್ಲೇ ನಾ ನಶಿಸಿ ನಿಂದೆ ಎಲ್ಲಿ ಮರೆಯಾಯಿತೋ ನಿನ್ನ ಪ್ರೀತಿಯ ಜೇಂಕಾರ ನೀನಾದೆ ನನ್ನ ಕೈಗೆಟುಕದ ಚಂದಿರ..... ...