ನನ್ನ ಕೈಗೆಟುಕದ ಚಂದಿರ

ಎತ್ತರದ  ಬಾನಲ್ಲಿ  ಮುದ್ದಾದ  ಚಂದಿರ
ಹುಣ್ಣಿಮೆಯ  ರಾತ್ರಿಯಲ್ಲಿ  ಬೆಳದಿಂಗಳ ಚಿತ್ತಾರ ......
ಚೆಲುವೆಯನ್ನು ಮೀರಿಸುವಂತ ಹೊಳಪು
ಆ  ನನ್ನ  ಚಂದಿರನಲ್ಲಿ
ತುಂಬಿಕೊಳ್ಳಲಿ ಹೇಗೆ  ಆ  ಕಂಪು
ಈ  ನನ್ನ ಕಣ್ಣುಗಳಲ್ಲಿ
ತೃಪ್ತಿಯಿಂದ  ನಗುತಿರಲು  ಅವನು  ಬಾನಂಗಳದಲ್ಲಿ
ಮನವು  ತೇಲುತಿತ್ತು  ತಂಗಾಳಿಯಲ್ಲಿ
ತಟ್ಟನೆ  ನೆನಪಾದೆ ನೀನು  ನನ್ನ  ಮನದ  ಚಂದಿರ
ಕಣಂಚಿನ ಧಾರೆಯಲ್ಲಿ  ಮೂಡಿತ್ತು
ನಿನ್ನ  ನೆನಪುಗಳ  ಆಧಾರ....
ನಾ  ಎಷ್ಟೋ ಹೊತ್ತಿದ್ದೆ  ಕನಸುಗಳನ್ನು
ನಿನ್ನೊಡಗೂಡಿ  ನೋಡಲು ಈ  ಚಂದಿರನನ್ನು.....
ಮನದ  ಮಾತುಗಳನ್ನು  ಹಂಚಿಕೊಂಡಿದ್ದೆ
ಪ್ರೀತಿಯ  ಲೋಕದಲ್ಲಿ ಕಳೆದುಹೋಗಿದ್ದೆ
ನನ್ನ  ಬದುಕಿಗೆ ನೀ  ಬೆಳದಿಂಗಳಾಗಿದ್ದೆ
ಕಾರ್ಮೋಡ ಕವಿದಂತೆ  ನೀ  ಮರೆಯಾಗಿ  ಹೋದೆ
ನಿನ್ನ ನೆನಪುಗಳಲ್ಲೇ ನಾ ನಶಿಸಿ  ನಿಂದೆ
ಎಲ್ಲಿ  ಮರೆಯಾಯಿತೋ ನಿನ್ನ  ಪ್ರೀತಿಯ  ಜೇಂಕಾರ
ನೀನಾದೆ  ನನ್ನ  ಕೈಗೆಟುಕದ  ಚಂದಿರ.....
                                                     - ಜಯಶ್ರೀ  ಜೆ  ಗೌಡ 

Comments

Popular posts from this blog

ಅಪ್ಪ

To My Love