ಕನಸು

                  ~ ಕನಸು~

ನಮ್ಮಿಬ್ಬರ  ಮೊದಲನೆ  ಭೇಟಿಯಲ್ಲಿ  ನನಗಿದು  ತಿಳಿದಿರಲಿಲ್ಲ 
ನನ್ನ  ಜೀವನದಲ್ಲಿ  ನಿನ್ನ ಮಹತ್ವ ಏಷ್ಟೆತ್ತರಕ್ಕೆ ಏರುವುದು ಎಂದು 
ಸ್ನೇಹಿತರಂತೆ  ಪರಿಚಯವಾಗಿ ಪ್ರಣಯಪಕ್ಷಿಗಳಂತೆ ಮಾರ್ಪಟ್ಟೆವು 
ಸಿಹಿಕನಸುಗಳು ಚಿಗುರೊಡೆದು ರೆಕ್ಕೆಬಿಚ್ಚಿಟ್ಟವು 
ಇದು ಕನಸಾಗೆ ಉಳಿಯುವುದೊ  ಗೆಳೆಯ.... ಇಲ್ಲ  ನನಸಾಗುವುದೊ....!!

ಮನದಾಳದ ಮಾತುಗಳನ್ನು ಹಂಚಿಕೊಂಡೆನು 
ನನಗರಿವಿಲ್ಲದಂತೆ ನಿನ್ನ ಪ್ರೀತಿಯಲ್ಲಿ ಬಂದಿಯಾದೆನು 
ಪ್ರತಿ  ಕ್ಷಣ  ನಿನ್ನೊಂದಿಗಿರಲು ಹಂಬಲ 
ಪ್ರತಿ ನಿಮಿಷ  ನಿನ್ನ ಧ್ವನಿ ಕೇಳುವ ತವಕ 
ಇದು ಕನಸಾಗೆ ಉಳಿಯುವುದೊ ಗೆಳೆಯ.... ಇಲ್ಲ ನನಸಾಗುವುದೊ .... !!

ಸ್ನೇಹಿತನಂತೆ ನನ್ನವರಿಗೆಲ್ಲ ಪರಿಚಯವಾದೆ 
ಪ್ರತಿ ಶುಭಸಮಾರಂಭಗಳಲ್ಲಿ ನನ್ನ ಕುಟುಂಬಕ್ಕೆ ಅತಿಥಿಯಾದೆ 
ನನ್ನ ತಂಗಿಗೆ  ಪ್ರೀತಿಯ ಅಣ್ಣನಾದೆ 
ತಂದೆ ತಾಯಿಗೆ ಮಗನ ಕೊರತೆಯನ್ನು ನೀಗಿಸಿದೆ 
ವರುಷಗಳು ಉರುಳಿದರು ನೀ  ಹೀಗೆ  ಇರಬೇಕೆಂಬ  ಆಶೆ 
ಇದು ಕನಸಾಗೆ ಉಳಿಯುವುದೊ ಗೆಳೆಯ.... ಇಲ್ಲ ನನಸಾಗುವುದೊ .... !!

ಕನಸನ್ನು ಹಿಂಬಾಲಿಸಿ ನೀ ವಿದೇಶಕ್ಕೆ ಹಾರಿದೆ 
ನಿನ್ನ  ಹಿಂಬಾಲಿಸಿ ಬರುವ ಹಂಬಲ ಹೆಚ್ಚಾಗಿದೆ 
ನಿನ್ನೋಡನೆ ಭವಿಷ್ಯದ ಉತ್ತುಂಗಕ್ಕೇರುವ ಬಯಕೆಗೆ  ರೆಕ್ಕೆ ಮೂಡಿದೆ 
ಇದು ಕನಸಾಗೆ ಉಳಿಯುವುದೊ ಗೆಳೆಯ.... ಇಲ್ಲ ನನಸಾಗುವುದೊ .... !!

ನಿನ್ನೋಡಗೂಡಿ ದುಡಿದು ಸಂಪಾದಿಸಬೇಕು 
ಹಿಂತಿರುಗಿ ಬಂದು  ಮನೆಯವರ ಮನಹೋಲಿಸಬೇಕು 
ನಮ್ಮದೇ ಸ್ವಂತ ಖರ್ಚಿನಲ್ಲಿ , ಎಲ್ಲರ ಸಮ್ಮುಖದಲ್ಲಿ 
ವಿಜೃಂಭಣೆಯಿಂದ ನಿನ್ನ ಬಾಳಸಂಗಾತಿಯಾಗಬೇಕು 
ಇದು ಕನಸಾಗೆ ಉಳಿಯುವುದೊ ಗೆಳೆಯ.... ಇಲ್ಲ ನನಸಾಗುವುದೊ .... !!

ನಮ್ಮದೇ  ಆದ  ಒಂದು ಚಿಕ್ಕ ಅರಮನೆ 
ಅಲ್ಲಿ ನೀನು ರಾಜ , ನಾನು ರಾಣಿ
ನಮಗೊಬ್ಬ ರಾಜಕುಮಾರ ಮತ್ತು ರಾಜಕುಮಾರಿ 
ಜೀವನಕ್ಕಾಗಿ ಒಂದು ಸಣ್ಣ ವ್ಯಾಪಾರ 
ಇದು ಸದ್ಯದ  ನಮ್ಮ ದಶವಾರ್ಷಿಕ ಯೋಜನೆ 
ಇದು ಕನಸಾಗೆ ಉಳಿಯುವುದೊ ಗೆಳೆಯ.... ಇಲ್ಲ ನನಸಾಗುವುದೊ .... !!

ನಿನ್ನ ಕಷ್ಟ-ಸುಖಗಳಲ್ಲಿ ಭಾಗಿಯಾಗಿ 
ನಮ್ಮ ಮಕ್ಕಳ ಆಶಕ್ತಿಯಂತೆ ಅವರ ಜೀವನ ರೂಪಿಸಿ 
ಮಾದರಿಯಾಗುವಂತೆ ತುಂಬು ಪ್ರೀತಿಯಿಂದ ಸಂಸಾರ ನಡೆಸಿ 
ನಿನ್ನ ಉಸಿರಲ್ಲಿ ಉಸಿರಾಗಿ 
ನಿನ್ನ ಮಡಿಲಲ್ಲೇ ಕೊನೆಯುಸಿರು ಬಿಡುವ ಬಯಕೆ.... 
ಇದು ಕನಸಾಗೆ ಉಳಿಯುವುದೊ ಗೆಳೆಯ.... ಇಲ್ಲ ನನಸಾಗುವುದೊ .... !!

                                                                     - Jayashree J  Gowda 

Comments

Popular posts from this blog

ಅಪ್ಪ

To My Love