Posts

To My Love

My soul, my love My heart,my love You are my everything. You gain nothing from doing. But you did so much for me. You expect nothing as return But to see me smiling. We don't know how long our relationship will lost. But you take every decision after discussing with me. We dont know what's written on our fate. But still you includes me in your Future plans. Should I call myself lucky to be your girl? Or Should I believe that I'm blessed by god? You took very special place in my heart That no one ever be. You took so many risk for me. You became lovable son to my family. Words are not Enough to say thank you. I owed you more And I admire  even more. Let me love you, like you do. Let me do something, like you did fr me. Give me a chance to prove my love towards you. I'm extremely happy with you and that's enough fr me. Now it's my turn So let me..... - Jayashree H.J

ಅಪ್ಪ

           ~  ಅಪ್ಪ ~  ಅಂದೊಂದು  ದಿನ ನಾ ಬೀಳದಂತೆ  ನನಗಾಸರೆಯಾಗಿ  ನೀ  ನಿಂದೆ  ನನ್ನ  ಪುಟ್ಟ  ಹೆಜ್ಜೆಗಳೊಂದಿಗೆ  ನಿನ್ನ  ಹೆಜ್ಜೆಯನಿಟ್ಟು ನನ್ನ ನಡೆಸುತ್ತಾ ಬಂದೆ ....  ನನ್ನೊಡಗೂಡಿ ಆಟವಾಡಿದೆ  ಆಟದೊಂದಿಗೆ  ಪಾಠವೂ ಕಲಿಸಿದೆ  ಅಮ್ಮ ನನ್ನ ಗದರಿಸಿದಾಗ  ನನ್ನ  ಪರವಾಗಿ ನಿಂದೆ ....  ನಾ  ಬೆಳೆಯುತ್ತ  ಬಂದಂತೆ  ನನ್ನ  ದಾರಿಗೆ  ದೀಪವಾದೆ  ಜೀವನ  ಮೌಲ್ಯಗಳ ಬಗ್ಗೆ  ನನ್ನಲ್ಲಿ ಅರಿವು ಮೂಡಿಸಿದೆ ....  ನನ್ನೆಲ್ಲ  ಕಷ್ಟ - ಸುಖಗಳಲ್ಲೂ  ನೀನಿದ್ದಿ   ಎಂಬ ಭರವಸೆಯನ್ನು ಮೂಡಿಸಿದೆ  ನನ್ನ  ಬೆನ್ನೆಲುಬಾಗಿ  ನೀನಿರುವೆ  ಎಂಬ   ವಿಶ್ವಾಶ ನನ್ನಲಿದೆ ....  ಅಪ್ಪ  ಎಂಬ ಎರಡಕ್ಷರದಲ್ಲಿ  ಎಷ್ಟಿದೆ  ಅರ್ಥ...  ನನ್ನೊಡನೆ  ನೀನಿರಲು  ಈ  ಜಗವೇ ನನ್ನ  ಸ್ವಂತ . 

ಕನಸು

                  ~ ಕನಸು~ ನಮ್ಮಿಬ್ಬರ  ಮೊದಲನೆ  ಭೇಟಿಯಲ್ಲಿ  ನನಗಿದು  ತಿಳಿದಿರಲಿಲ್ಲ  ನನ್ನ  ಜೀವನದಲ್ಲಿ  ನಿನ್ನ ಮಹತ್ವ ಏಷ್ಟೆತ್ತರಕ್ಕೆ ಏರುವುದು ಎಂದು  ಸ್ನೇಹಿತರಂತೆ  ಪರಿಚಯವಾಗಿ ಪ್ರಣಯಪಕ್ಷಿಗಳಂತೆ ಮಾರ್ಪಟ್ಟೆವು  ಸಿಹಿಕನಸುಗಳು ಚಿಗುರೊಡೆದು ರೆಕ್ಕೆಬಿಚ್ಚಿಟ್ಟವು  ಇದು ಕನಸಾಗೆ ಉಳಿಯುವುದೊ  ಗೆಳೆಯ.... ಇಲ್ಲ  ನನಸಾಗುವುದೊ....!! ಮನದಾಳದ ಮಾತುಗಳನ್ನು ಹಂಚಿಕೊಂಡೆನು  ನನಗರಿವಿಲ್ಲದಂತೆ ನಿನ್ನ ಪ್ರೀತಿಯಲ್ಲಿ ಬಂದಿಯಾದೆನು  ಪ್ರತಿ  ಕ್ಷಣ  ನಿನ್ನೊಂದಿಗಿರಲು ಹಂಬಲ  ಪ್ರತಿ ನಿಮಿಷ  ನಿನ್ನ ಧ್ವನಿ ಕೇಳುವ ತವಕ  ಇದು ಕನಸಾಗೆ ಉಳಿಯುವುದೊ ಗೆಳೆಯ.... ಇಲ್ಲ ನನಸಾಗುವುದೊ .... !! ಸ್ನೇಹಿತನಂತೆ ನನ್ನವರಿಗೆಲ್ಲ ಪರಿಚಯವಾದೆ  ಪ್ರತಿ ಶುಭಸಮಾರಂಭಗಳಲ್ಲಿ ನನ್ನ ಕುಟುಂಬಕ್ಕೆ ಅತಿಥಿಯಾದೆ  ನನ್ನ ತಂಗಿಗೆ  ಪ್ರೀತಿಯ ಅಣ್ಣನಾದೆ  ತಂದೆ ತಾಯಿಗೆ ಮಗನ ಕೊರತೆಯನ್ನು ನೀಗಿಸಿದೆ  ವರುಷಗಳು ಉರುಳಿದರು ನೀ  ಹೀಗೆ  ಇರಬೇಕೆಂಬ  ಆಶೆ  ಇದು ಕನಸಾಗೆ ಉಳಿಯುವುದೊ ಗೆಳೆಯ.... ಇಲ್ಲ ನನಸಾಗುವುದೊ .... !! ಕನಸನ್ನು ಹಿಂಬಾಲಿಸಿ ನೀ ವಿದೇಶಕ್ಕೆ ಹ...

ನನ್ನ ಕೈಗೆಟುಕದ ಚಂದಿರ

ಎತ್ತರದ  ಬಾನಲ್ಲಿ  ಮುದ್ದಾದ  ಚಂದಿರ ಹುಣ್ಣಿಮೆಯ  ರಾತ್ರಿಯಲ್ಲಿ  ಬೆಳದಿಂಗಳ ಚಿತ್ತಾರ ...... ಚೆಲುವೆಯನ್ನು ಮೀರಿಸುವಂತ ಹೊಳಪು ಆ  ನನ್ನ  ಚಂದಿರನಲ್ಲಿ ತುಂಬಿಕೊಳ್ಳಲಿ ಹೇಗೆ  ಆ  ಕಂಪು ಈ  ನನ್ನ ಕಣ್ಣುಗಳಲ್ಲಿ ತೃಪ್ತಿಯಿಂದ  ನಗುತಿರಲು  ಅವನು  ಬಾನಂಗಳದಲ್ಲಿ ಮನವು  ತೇಲುತಿತ್ತು  ತಂಗಾಳಿಯಲ್ಲಿ ತಟ್ಟನೆ  ನೆನಪಾದೆ ನೀನು  ನನ್ನ  ಮನದ  ಚಂದಿರ ಕಣಂಚಿನ ಧಾರೆಯಲ್ಲಿ  ಮೂಡಿತ್ತು ನಿನ್ನ  ನೆನಪುಗಳ  ಆಧಾರ.... ನಾ  ಎಷ್ಟೋ ಹೊತ್ತಿದ್ದೆ  ಕನಸುಗಳನ್ನು ನಿನ್ನೊಡಗೂಡಿ  ನೋಡಲು ಈ  ಚಂದಿರನನ್ನು..... ಮನದ  ಮಾತುಗಳನ್ನು  ಹಂಚಿಕೊಂಡಿದ್ದೆ ಪ್ರೀತಿಯ  ಲೋಕದಲ್ಲಿ ಕಳೆದುಹೋಗಿದ್ದೆ ನನ್ನ  ಬದುಕಿಗೆ ನೀ  ಬೆಳದಿಂಗಳಾಗಿದ್ದೆ ಕಾರ್ಮೋಡ ಕವಿದಂತೆ  ನೀ  ಮರೆಯಾಗಿ  ಹೋದೆ ನಿನ್ನ ನೆನಪುಗಳಲ್ಲೇ ನಾ ನಶಿಸಿ  ನಿಂದೆ ಎಲ್ಲಿ  ಮರೆಯಾಯಿತೋ ನಿನ್ನ  ಪ್ರೀತಿಯ  ಜೇಂಕಾರ ನೀನಾದೆ  ನನ್ನ  ಕೈಗೆಟುಕದ  ಚಂದಿರ.....                                 ...
  ಇಂದೇಕೆ  ಬರಲಿಲ್ಲ ಗೆಳತಿ.... .. ಬೇಡವೆಂದರೂ ಬೇಸರಿಕೆ ನನ್ನನ್ನು ಆವರಿಸಿದೆ  ಏನಾದರೂ ಪಿಸುಗುಡೋಣ ವೆಂದರೆ  ಗೆಳತಿ ಪಕ್ಕದಲ್ಲಿಲ್ಲ  ಅವಳೇಕೆ ಇಂದು ಗೈರು ಹಾಜರಿಯೋ  ನನಗು ತಿಳಿದಿಲ್ಲ .......  ತರಗತಿಗೆ ಬಂದಾಗಿನಿಂದ ಬಾಗಿಲೆಡೆಗೆ  ನನ್ನ ದೃಷ್ಟಿ  ಈಗ ಬಂದಾಳು , ಮತ್ತೆ  ಬರುವಳು  ಎಂಬ ಸಾಂತ್ವನದ ಮಾತು ಮನದಲ್ಲಿ  ಹರಟಲೆಂದೇ ಹೊತ್ತು ತಂದಿದ್ದೆ ಹೊಸ ವಿಷಯಗಳ ಬುತ್ತಿ ಇಂದು ಅವಳೆ ಇಲ್ಲ ಏನು ಮಾಡಲಿ?......  ಬರುವುದಿಲ್ಲವೆಂದು ಮುಂಚಿತವಾಗಿ ತಿಳಿಸುತಿದ್ದವಳು ಇಂದೇಕೆ ಹೀಗೆ ಮಾಡಿದಳೊ? ಆರೋಗ್ಯ ಸರಿ ಇಲ್ಲವೆ ಅಥವಾ ಮನೆಯಲ್ಲಿ ಏನಾದರೂ ಸಮಸ್ಯೆಯೇ ? ಹೀಗೆ ಹುಚ್ಚುಚ್ಚು ಕಲ್ಪನೆಗಳು.......  ಅಂತೂ ನಾನಿಂದು ಒಬ್ಬಂಟಿ  ಎಲ್ಲದರಲ್ಲೂ  ನನಗೆ ನಿರಾಸಕ್ತಿ  ಹೇಗೋ  ಮನಸನ್ನು ಕೆಂದ್ರೀ ಕರಿಸಿ  ಕುಳಿತೆ  ಪಾಠದಕಡೆ ಗಮನವಿರಿಸಿ  ಆದರೂ ಮನದ ಕೂಗು ಕೇಳಿಸುತಿತ್ತು  ಇಂದೇಕೆ  ಬರಲಿಲ್ಲ ಗೆಳತಿ...... ?                                            - ಜಯಶ್ರೀ.  ಜೆ . ಗೌಡ