ಅಪ್ಪ
~ ಅಪ್ಪ ~ ಅಂದೊಂದು ದಿನ ನಾ ಬೀಳದಂತೆ ನನಗಾಸರೆಯಾಗಿ ನೀ ನಿಂದೆ ನನ್ನ ಪುಟ್ಟ ಹೆಜ್ಜೆಗಳೊಂದಿಗೆ ನಿನ್ನ ಹೆಜ್ಜೆಯನಿಟ್ಟು ನನ್ನ ನಡೆಸುತ್ತಾ ಬಂದೆ .... ನನ್ನೊಡಗೂಡಿ ಆಟವಾಡಿದೆ ಆಟದೊಂದಿಗೆ ಪಾಠವೂ ಕಲಿಸಿದೆ ಅಮ್ಮ ನನ್ನ ಗದರಿಸಿದಾಗ ನನ್ನ ಪರವಾಗಿ ನಿಂದೆ .... ನಾ ಬೆಳೆಯುತ್ತ ಬಂದಂತೆ ನನ್ನ ದಾರಿಗೆ ದೀಪವಾದೆ ಜೀವನ ಮೌಲ್ಯಗಳ ಬಗ್ಗೆ ನನ್ನಲ್ಲಿ ಅರಿವು ಮೂಡಿಸಿದೆ .... ನನ್ನೆಲ್ಲ ಕಷ್ಟ - ಸುಖಗಳಲ್ಲೂ ನೀನಿದ್ದಿ ಎಂಬ ಭರವಸೆಯನ್ನು ಮೂಡಿಸಿದೆ ನನ್ನ ಬೆನ್ನೆಲುಬಾಗಿ ನೀನಿರುವೆ ಎಂಬ ವಿಶ್ವಾಶ ನನ್ನಲಿದೆ .... ಅಪ್ಪ ಎಂಬ ಎರಡಕ್ಷರದಲ್ಲಿ ಎಷ್ಟಿದೆ ಅರ್ಥ... ನನ್ನೊಡನೆ ನೀನಿರಲು ಈ ಜಗವೇ ನನ್ನ ಸ್ವಂತ .